ಬಿಬಿಎಂಪಿ ಮತ್ತು ಜನಾಗ್ರಹದಿಂದ 2022-2023ನೇ ಸಾಲಿನ ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಚಾಲನೆ
Bala Janaagraha
ಜನಾಗ್ರಹ ಪತ್ರಿಕಾ ಪ್ರಕಟಣೆ
ತಕ್ಷಣದ ಪ್ರಕಟಣೆಗಾಗಿ
ಬಿಬಿಎಂಪಿ ಮತ್ತು ಜನಾಗ್ರಹದಿಂದ 2022-2023ನೇ ಸಾಲಿನ ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಚಾಲನೆ
ಸಹಭಾಗಿ ಬಜೆಟ್ ನ ಆರನೇ ಆವೃತ್ತಿಗೆ ಚಾಲನೆ ನೀಡಿದ ಬೆಂಗಳೂರು!
ಪಾದಾಚಾರಿ ರಸ್ತೆ, ಸಾರ್ವಜನಿಕ ಶೌಚಾಲಯ ಮತ್ತು ಉದ್ಯಾನವನಗಳ ಬಗ್ಗೆ ಸಲಹೆಗಳ ಸಂಗ್ರಹ!
ನಾಗರಿಕರು ಈ ವಿಷಯಗಳ ಕುರಿತು ಬಜೆಟ್ ಬಸ್ ಅಥವಾ mycitymybudget.in ನಲ್ಲಿ ಸಲಹೆಯನ್ನು ನೀಡಬಹುದು
ಬಿಬಿಎಂಪಿ ಬಜೆಟ್ ನಲ್ಲಿ ನಾಗರೀಕ ಸಹಭಾಗಿತ್ವವನ್ನು ಉತ್ತೇಜಿಸುವ ನನ್ನ ನಗರ ನನ್ನ ಬಜೆಟ್ ಅಭಿಯಾನದ 2022-23ನೇ ಸಾಲಿನ ಆವೃತ್ತಿಯನ್ನು ಬಿಬಿಎಂಪಿಯು ಜನಾಗ್ರಹ ಸಂಸ್ಥೆಯ ಸಹಯೋಗದಲ್ಲಿ 22ನೇ ಫೆಬ್ರವರಿ 2022ರಂದು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಉದ್ಘಾಟಿಸಲಾಯಿತು.
ಈ ಅಭಿಯಾನದ ಚಾಲನೆಯ ಸಮಯದಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತಾರವರು, “ಬೆಂಗಳೂರಿನ ನಾಗರಿಕರು ಬೇರೆ ಯಾವುದೇ ನಗರಗಳಿಗೆ ಹೋಲಿಸಿದ್ದಲ್ಲಿ, ಹೆಚ್ಚು ಸಕ್ರೀಯವಾಗಿ ನಗರದ ಬೆಳವಣಿಗೆಗೆ ಸ್ಪಂದಿಸುತ್ತಾರೆ.” ಎಂದು ಹೇಳಿದರು.
“ಈ ಅಭಿಯಾನವು ಸಮಾಜದ ಎಲ್ಲಾ ಸ್ಥಳಗಳ ಜನರು ತಮ್ಮ ಪರಿಸರದಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸಿ, ನಮಗೆ ತಿಳಿಸಿ, ಈ ಮೂಲಕ ನಗರದ ಬಜೆಟ್ ತಯಾರಿಕೆಯಲ್ಲಿ ಮತ್ತು ಅದರ ಅನುಷ್ಠಾನದಲ್ಲಿ ಸಹಭಾಗಿಯಾಗಬೇಕು ಅನ್ನುವ ಕಾರಣದಿಂದಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಕಳೆದ ಬಾರಿ ಬಿಬಿಎಂಪಿಯು ವಾರ್ಡ್ ಸಮಿತಿಗಳಿಗೆ 60 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿತ್ತು. ಈ ಉಪಕ್ರಮವನ್ನು ಮುಂದುವರಿಸುವುದು ಅಗತ್ಯ. ಇದಕ್ಕಾಗಿ ಜನರ ಸಹಭಾಗಿತ್ವ ಮುಖ್ಯ. ಜನಾಗ್ರಹ ಸಂಸ್ಥೆ ಈ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ ಎಂಬುದು ನಮ್ಮ ನಂಬಿಕೆ” ಎಂದು ಹೇಳಿದರು.
“ಪತಿ ವರ್ಷ ಬಿಬಿಎಂಪಿಯು ನಗರದ ಬಜೆಟ್ ತಯಾರಿಕೆಯಲ್ಲಿ ಪಾಲ್ಗೊಳ್ಳಲು ನಾಗರಿಕರಿಗೆ ಕರೆ ನೀಡುತ್ತದೆ. ಇದು ಭಾರತದ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಿ, ನಗರದೆಲ್ಲೆಡೆಯಿಂದ ಸಲಹೆಗಳನ್ನು ಸಂಗ್ರಹಿಸಿ, ನಮ್ಮ ಸಮಾಜದ ಎಲ್ಲಾ ವರ್ಗಗಳ ಧ್ವನಿಯು ಪರಿಗಣನೆಗೆ ತೆಗೆದುಕೊಳ್ಳಲು, ಸಮಯಾವಕಾಶ ಮುಗಿಯುವ ಮೊದಲು ಬಿಬಿಎಂಪಿಗೆ ಕಾರ್ಯಸಾಧ್ಯ ಸಲಹೆಗಳನ್ನು ತಲುಪಿಸಲು ಜನಾಗ್ರಹ ಸಂಸ್ಥೆ ಸಹಕಾರಿಯಾಗುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ಇದಕ್ಕೆಂದೇ 40ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳು ಕೈಜೋಡಿಸುತ್ತವೆ. ಕಳೆದ ವರ್ಷ ಚಾರಿತ್ರಿಕ ನಡೆಯನ್ನು ಕೈಗೊಂಡ ಬಿಬಿಎಂಪಿಯು, ಸಾರ್ವಜನಿಕರು ನಿರ್ಧಾರ ತೆಗೆದುಕೊಳ್ಳಲೆಂದು ವಾರ್ಡ್ ಸಮಿತಿಗಳಿಗೆ ತಲಾ 60 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿತು. ಇದರಿಂದಾಗಿ, ಅನೇಕ ವಾರ್ಡ್ ಗಳಲ್ಲಿ ನಾಗರೀಕ ಸಹಭಾಗಿತ್ವಕ್ಕೆ ಹೊಸ ರೂಪುರೇಷೆ ದೊರೆಯಿತು. ಇದರ ಮೂಲಕ ನಾಗರಿಕರು ಬಿಬಿಎಂಪಿಯೊಂದಿಗೆ ಒಗ್ಗೂಡಿ ರಿಪೇರಿ ಮಾಡಬೇಕಾದ ಪಾದಾಚಾರಿ ಮಾರ್ಗಗಳನ್ನು ಗುರುತಿಸಿದರು. ಈ ವರ್ಷ ಅಭಿಯಾನದ ಅಂಗವಾಗಿ ಸಾರ್ವಜನಿಕರಿಂದ ಉದ್ಯಾನವನ, ಪಾದಾಚಾರಿ ರಸ್ತೆ ಮತ್ತು ಸಾರ್ವಜನಿಕ ಶೌಚಾಲಯದ ಬಗ್ಗೆ ಸಲಹೆಗಳನ್ನು ಪಡೆಯಲಾಗುತ್ತಿದೆ. ಬೆಂಗಳೂರಿನಾದ್ಯಂತ ನಾಗರಿಕ ಗುಂಪುಗಳೊಂದಿಗೆ ಮತ್ತು ಬಿಬಿಎಂಪಿಯೊಂದಿಗೆ ಒಗ್ಗೂಡಿ ಪಾದಾಚಾರಿ ಮಾರ್ಗ ಹಾಗು ಸಾರ್ವಜನಿಕ ಶೌಚಾಲಯಗಳಲ್ಲಿ ಬದಲಾವಣೆಯನ್ನು ತರಲು ನಾವು ಉತ್ಸುಕರಾಗಿದ್ದೇವೆ,” ಎಂದು ಜನಾಗ್ರಹ ಸಂಸ್ಥೆಯ ನಾಗರೀಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿಯವರು ಹೇಳಿದರು.
ನಾಗರೀಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆಯಾದ ಸಪ್ನಾ ಕರೀಂ ರವರು ಮಾತನಾಡುತ್ತ, “ಕಳೆದ ವರ್ಷ ವಾರ್ಡ್ ಸಮಿತಿಗಳಿಗೆ ಅನುದಾನವನ್ನು ನೀಡುವ ಮೂಲಕ ಬಿಬಿಎಂಪಿಯು ಉತ್ತಮ ಹೆಜ್ಜೆಯನ್ನು ಇಟ್ಟಿತು. ಇದು ದೇಶದಲ್ಲೇ ಮೊದಲ ಬಾರಿ ನಡೆದ ಸಂಗತಿ. ಬಿಬಿಎಂಪಿಯು ನನ್ನ ನಗರ ನನ್ನ ಬಜೆಟ್ ಅಭಿಯಾನವನ್ನು ಆರನೇ ಬಾರಿ ಜಾರಿಗೊಳಿಸಿ ಸಹಭಾಗಿ ಬಜೆಟ್ ನನ್ನು ತಯಾರಿಸಿ ವಾರ್ಡ್ ಸಮಿತಿಗಳನ್ನು ಸಧೃಡ ಪಡಿಸುತ್ತಿರುವುದು ಸಂತೋಷದ ವಿಷಯ. ನಾಗರೀಕ ಮತ್ತು ಸಮುದಾಯ ಸಂಸ್ಥೆಗಳು ಈ ಅಭಿಯಾನಕ್ಕೆ ಬಹಳಷ್ಟು ಬೆಂಬಲವನ್ನು ನೀಡಿವೆ. ನಮ್ಮ ನಗರ ಖಂಡಿತವಾಗಿ ಸ್ಥಳೀಯ ಸರ್ಕಾರ ಹಾಗು ನಾಗರೀಕ ಸಹಭಾಗಿತ್ವದಲ್ಲಿ ಚರಿತ್ರೆಯನ್ನು ಸೃಷ್ಟಿಸುತ್ತಿದೆ” ಎಂದು ಹೇಳಿದರು.
ನಾಗರಿಕರ ಸಹಭಾಗಿತ್ವವನ್ನು ಉತ್ತೇಜಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಜೆಟ್ ಪ್ರಕ್ರಿಯೆಗೆ ನನ್ನ ನಗರ ನನ್ನ ಬಜೆಟ್ ಮುಖೇನ ನಾಗರಿಕರ ಮನೆ ಬಾಗಿಲಿಗೆ ಬಜೆಟ್ ಸಲಹೆಗಳನ್ನು ಪಡೆಯಲು ಬಜೆಟ್ ಬಸ್ ಅನ್ನು ಆಯೋಜಿಸಿತ್ತು ಅದರಂತೆ ಕಳೆದ ವರ್ಷ ನನ್ನ ನಗರ ನನ್ನ ಬಜೆಟ್ ಅಭಿಯಾನದಲ್ಲಿ ಬೆಂಗಳೂರಿನ ನಾಗರಿಕರು ಸಕ್ರಿಯವಾಗಿ ಭಾಗವಹಿಸಿ ಸಲಹೆಗಳನ್ನು ನೀಡಿದ್ದರು ಇದನ್ನು ಅಂಗೀಕರಿಸಿ ಪಾಲಿಕೆ ಬಜೆಟ್ ನಲ್ಲಿ 60 ಲಕ್ಷ ಅನುದಾನವನ್ನು ಮೀಸಲಿರಿಸಿ ಇದನ್ನು ವಾರ್ಡ್ ಕಮಿಟಿ ಮುಖೇನ ಬಳಸಿಕೊಳ್ಳುವಂತೆ ನೋಡಿಕೊಂಡ ಪ್ರಥಮ ಪಾಲಿಕೆ ಎಂದರೆ ತಪ್ಪಾಗಲಾರದು.
ಈ ವರ್ಷದ ನನ್ನ ನಗರ ನನ್ನ ಬಜೆಟ್ ಅಭಿಯಾನವು ಪ್ರಾರಂಭವಾಗಿದ್ದು ಬಜೆಟ್ ಬಸ್ ಬೆಂಗಳೂರಿನಾದ್ಯಂತ ಸಂಚರಿಸಲಿದ್ದು ನಾಗರಿಕರು ಇದನ್ನು ಸದುಪಯೋಗ ಪಡಿಸಿಕೊಂಡು ಪಾಲಿಕೆಯ ಬಜೆಟ್ ಪ್ರಕ್ರಿಯೆಗೆ ತಮ್ಮ ಧ್ವನಿಯನ್ನು ಸೇರಿಸಬೇಕೆಂದು – ಮೈ ಸಿಟಿ ಮೈ ಬಜೆಟ್ ಬೆಂಗಳೂರು ಉಸ್ತುವಾರಿಯಾದ ಮಂಜುನಾಥ ಹೆಚ್ ಎಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಐದು ವಾರ್ಡ್ (ವರ್ತೂರು, ಬಾಣಸವಾಡಿ, ಗೊಟ್ಟಿಗೆರೆ, ರಾಧಾಕೃಷ್ಣ ವಾರ್ಡ್, ಸಂಜಯ ನಗರ) ಗಳು ತಮ್ಮ ವಾಕೆಬಿಲಿಟಿ ಇಂಡೆಕ್ಸ್ ಅಂದರೆ, ನಡೆಯುವುದರ ಸೂಚ್ಯಂಕವನ್ನು ಪ್ರಸ್ತುತಪಡಿಸಿ, ಅವರ ವಾರ್ಡ್ ಗಳಿಕೆ ನೀಡಲಾಗಿರುವ 20 ಲಕ್ಷ ರೂಪಾಯಿಗಳನ್ನು ಹೇಗೆ ಪಾದಾಚಾರಿ ಮಾರ್ಗವನ್ನು ಉತ್ತಮಗೊಳಿಸಲು ಬಳಸಲಾಗುವುದು ಎಂದು ತಿಳಿಸಿದರು.
“ಜನರಿಗೆ ನಡೆಯಲು ಉತ್ತಮ ಪಾದಾಚಾರಿ ರಸ್ತೆ ಬೇಕು. ನಾವು ನಡೆಯುವುದರ ಮೇಲೆ ಕೈಗೊಂಡ ಸಮೀಕ್ಷೆಯಲ್ಲಿ ಭಾಗವಹಿಸಿ ನಮ್ಮ ನಮ್ಮ ವಾರ್ಡ್ ಗಳಲ್ಲಿ ಪಾದಾಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿದ್ದೇವೆ. ಬೆಂಗಳೂರನ್ನು ವಾಸ ಯೋಗ್ಯ ಮಾಡಲು ನಾವು ಈ ಮೂಲಕ ಬಿಬಿಎಂಪಿಗೆ ಮನವಿ ಮಾಡುತ್ತಿದ್ದೇವೆ ಎಂದು ಸಂಜಯ ನಗರ ವಾರ್ಡ್ ಸಮಿತಿ ಸದಸ್ಯರಾದ ಗೀತಾ ಗೂಟಿಯವರು ಹೇಳಿದರು.
“ವರ್ತೂರು ಅತಿ ದೊಡ್ಡ ವಾರ್ಡ್ ಆಗಿದ್ದು, ನಮ್ಮ ವಾರ್ಡ್ ಗೆ ಇನ್ನೂ ಹೆಚ್ಚು ಅನುದಾನ ಬೇಕಾಗುತ್ತದೆ” ಎಂದು ಅಲ್ಲಿನ ಜಗದೀಶ್ ರೆಡ್ಡಿಯವರು ಹೇಳಿದರು.
“ವಾರ್ಡ್ ಸಮಿತಿಗಳ ಮೂಲಕ ನಾವು ಪಾದಾಚಾರಿ ರಸ್ತೆಗಳನ್ನು ನೆಡೆಯಲು ಹೆಚ್ಚು ಯೋಗ್ಯಕರ ಮಾಡುವತ್ತ ಶ್ರಮಿಸಬೇಕು. ನಾವು ಇಲ್ಲಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸುವುದು ಸುಲಭವಾಗಿದೆ,” ಎಂದು ಲಲಿತಾ ರವರು ಹೇಳಿದರು.
ಗೊಟ್ಟಿಗೆರೆಯ ಕಮಲೇಶ್ ರವರು “ವಾರ್ಡ್ ಸಮಿತಿಯ ಬಜೆಟ್ ಅನುದಾನದಿಂದಾಗಿ ನಾವು ವಾರ್ಡ್ನ ಕೆಲವು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು.”
ಈ ಸಾಲಿನಲ್ಲಿ ನನ್ನ ನಗರ ನನ್ನ ಬಜೆಟ್ ಯಾವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿದೆ?
ಈ ಬಾರಿ ನನ್ನ ನಗರ ನನ್ನ ಬಜೆಟ್ ಅಭಿಯಾನವು ಉದ್ಯಾನವನ, ಪಾದಾಚಾರಿ ಮಾರ್ಗ ಮತ್ತು ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಾಗರಿಕರಿಂದ ಸಲಹೆಗಳನ್ನು ಪಡೆಯಲಿದೆ. ಈ ಅಭಿಯಾನ ಮಾರ್ಚ್ 15ರ ವರೆಗೆ ನಗರದ ಎಲ್ಲಾ ಭಾಗಗಳಲ್ಲಿ ನಡೆಯಲಿದೆ. ಜನಾಗ್ರಹ ಎಲ್ಲಾ ಸಲಹೆಗಳನ್ನು ಸ್ವೀಕರಿಸಿ, ವಿಶ್ಲೇಷಿಸಿ, ನಂತರ ಬಿಬಿಎಂಪಿಗೆ ಅದನ್ನು ಬಜೆಟ್ ನಲ್ಲಿ ಸಂಯೋಜಿಸಲು ಸಲ್ಲಿಸಲಿದೆ. ಬಿಬಿಎಂಪಿ ನಡೆಸುತ್ತಿರುವ ಈ ಸಮೀಕ್ಷೆಯು ಜನರಲ್ಲಿ ವಾರ್ಡ್ ಸಮಿತಿ ಮತ್ತು ಬಜೆಟ್ ಹಂಚಿಕೆಯ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ.
ನನ್ನ ನಗರ ನನ್ನ ಬಜೆಟ್ ಅಭಿಯಾನವನ್ನು ಬಿಬಿಎಂಪಿಯು ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ 2015ರಲ್ಲಿ ಪ್ರಥಮ ಬಾರಿಗೆ ಉದ್ಘಾಟಿಸಲಾಯಿತು.
ಪ್ರಾರಂಭಗೊಂಡ ಮೊದಲ ವರ್ಷದಲ್ಲಿ, ಅಭಿಯಾನವನ್ನು ಕೆಲವು ವಾರ್ಡ್ ಗಳಲ್ಲಿ ಮಾತ್ರ ಜಾರಿಮಾಡಲಾಯಿತು. ಈ ಆವೃತ್ತಿಯಲ್ಲಿ ಸುಮಾರು 6037 ನಾಗರಿಕರು ಭಾಗವಹಿಸಿದರು. ಪ್ರಥಮ ಬಾರಿಗೆ ಕಂಡ ಈ ಯಶಸ್ಸಿನ ಬೆನ್ನಲ್ಲೇ, 2016ರಲ್ಲಿ ಅಭಿಯಾನವನ್ನು ಬಿಬಿಎಂಪಿ ಮೇಯರ್ ಹಾಗು ಆಯುಕ್ತರ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ ಜಾರಿಗೊಳಿಸಲಾಯಿತು.
2017ರಲ್ಲಿ ಅಭಿಯಾನದಿಂದ ದೊರೆತ 12,468 ಸಲಹೆಗಳನ್ನು 600 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ಬಜೆಟ್ ನಲ್ಲಿ ಸಂಯೋಜಿಸಲಾಯಿತು. 2018-19ರಲ್ಲಿ ಈ ಅಭಿಯಾನವು 67,114 ನಾಗರಿಕರಿಂದ ಬಜೆಟ್ ಮೇಲಿನ ಅವರ ಅಭಿಪ್ರಾಯವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಇದೇ ಸಾಲಿನಲ್ಲಿ ಜನಾಗ್ರಹ ಮತ್ತು ಬಿಬಿಎಂಪಿ ಅಧಿಕೃತ ಒಪ್ಪಂದವನ್ನು ಮಾಡಿಕೊಂಡಿತು.
2021-22ರಲ್ಲಿ ಅಭಿಯಾನದ ಭಾಗವಾಗಿ ಪಾದಾಚಾರಿ ಮಾರ್ಗ, ಸಾರ್ವಜನಿಕ ಶೌಚಾಲಯ ಮತ್ತು ಮುಕ್ತ ಮಲವಿಸರ್ಜನಾ ಸ್ಥಳಗಳ ಮೇಲೆ ಹೆಚ್ಚು ಒತ್ತು ನೀಡಲಾಯಿತು. ಇದಕ್ಕೆಂದೇ ಸರಿಸುಮಾರು 42 ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳು, ನಿವಾಸಿ ಕಲ್ಯಾಣ ಗುಂಪುಗಳು, ಮತ್ತು ಇತರ ಸಂಘಗಳು ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದವು. ಅಭಿಯಾನಕ್ಕೆ ದೊರೆತ ಅತೀವ ಬೆಂಬಲದಿಂದಾಗಿ ಬಿಬಿಎಂಪಿಯು ಬೆಂಗಳೂರಿನ ಎಲ್ಲಾ 198 ವಾರ್ಡ್ ಸಮಿತಿಗಳಿಗೆ ತಲಾ 60 ಲಕ್ಷ ರೂಪಾಯಿ ಅನುದಾನವನ್ನು ನಿಗದಿಪಡಿಸಿತು.
2021ರಲ್ಲಿ ನನ್ನ ನಗರ ನನ್ನ ಬಜೆಟ್ ನನ್ನು ಮಂಗಳೂರು ಮತ್ತು ವೈಝಾಗ್ ನಲ್ಲಿಯೂ ಜಾರಿ ಮಾಡಲಾಯಿತು. ಈ ಅಭಿಯಾನವು ನಗರ ಪಾಲಿಕೆಯ ಬಜೆಟ್ ತಯಾರಿಕೆಯಲ್ಲಿ ನಾಗರಿಕರ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ಮಹತ್ತರವಾಗಿದೆ.
ಈ ವರ್ಷ ಪುನಃ ಈ ಅಭಿಯಾನ ಸಾರ್ವಜನಿಕರಿಂದ ಉದ್ಯಾನವನ, ಪಾದಾಚಾರಿ ರಸ್ತೆ ಮತ್ತು ಸಾರ್ವಜನಿಕ ಶೌಚಾಲಯದ ಬಗ್ಗೆ ಸಲಹೆಗಳನ್ನು ಕೇಳುತ್ತಿದೆ.
ಜನಾಗ್ರಹದ ಬಗ್ಗೆ
ಜನಾಗ್ರಹ ಸಂ ಸ್ಥೆಯು ರಮೇಶ್ ರಾಮನಾಥನ್ ಮತ್ತು ಸ್ವಾತಿ ರಾಮನಾಥನ್ ರವರು 2001 ರಲ್ಲಿ ಸ್ಥಾಪಿಸಿದ ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, ಇದರ ಉದ್ದೇ ಶವು ಭಾರತದ ನಗರ ಮತ್ತು ಪಟ್ಟಣಗಳ ಜೀವನ ಮಟ್ಟದಲ್ಲಿ ಸುಧಾರಣೆಯನ್ನು ತರುವುದಾಗಿದೆ. ಜನಾಗ್ರಹ ಸಂಸ್ಥೆಯು ನಗರಾಡಳಿತ ವಿಭಾಗದಲ್ಲಿ ಆಡಳಿತಾತ್ಮಕ ಮತ್ತು ಶಾಸಕಾಂಗ ಸುಧಾರಣೆಯನ್ನು ತರಲು ಸರ್ಕಾರದ ಮಟ್ಟದಲ್ಲಿ ಶ್ರಮಿಸಿದೆ.
ಜನಾಗ್ರಹದ ಚಿಂತನೆಯು ಸಮಸ್ಯೆಯ ಬದಲಾಗಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವತ್ತ ಏಕಾಗ್ರತವಾಗಿದೆ. ಈ ದೇಯ್ಯವನ್ನು ಪೂರೈಸಲು, ಜನಾಗ್ರಹ ಸಂಸ್ಥೆಯು ನಾಗರಿಕರೊಂದಿಗೆ ಸಂವಹಿಸಿ ನಗರ ವ್ಯವಸ್ಥೆ ಮತ್ತು ಸರ್ಕಾರಿ ಅಂಗಗಳಲ್ಲಿ ಬದಲಾವಣೆಯನ್ನು ತರಲು ಶ್ರಮಿಸುತ್ತದೆ. (ಇದನ್ನು ನಾವು ನಗರ ವ್ಯವಸ್ಥೆ ಎಂದು ಕರೆಯುತ್ತೇ ವೆ) ಮೂಲಸೌಕರ್ಯ, ಸೇ ವೆಗಳು ಮತ್ತು ಪೌರತ್ವದ ಸುಧಾರಣೆಯಿಂದ ಜೇವನದ ಗುಣಮಟ್ಟದಲ್ಲಿ
ನೇರವಾಗಿ ಬದಲಾವಣೆಯನ್ನು ತರಬಹುದು ಎಂಬುದು ಜನಾಗ್ರಹದ ಧೃಡ ನಂಬಿಕೆ. ಅದಕ್ಕಾಗಿಯೇ , ಈ ಸಂಸ್ಥೆಯು ಕಾನೂನು,
ಕಾಯ್ದೆ, ಮತ್ತು ಹವಾಮಾನ ಬದಲಾವಣೆ, ಲಿಂಗ ಸಮಾನತೆ ಮತ್ತು ಸಾರ್ವಜನಿಕರ ಸುರಕ್ಷತೆ, ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಅರೋಗ್ಯದ ಮೇಲೆ ಕೆಲಸ ನಿರ್ವಹಿಸುವ ಅಂಗಗಳ ಜೊತೆಗೂಡಿ ಕಾರ್ಯ ನಿರ್ವ ಹಿಸುತ್ತದೆ. ಅದನ್ನು ನಾಗರೀಕ ಸಹಭಾಗಿತ್ವ, ಪಾಲಿಕೆಯ ಹಣಕಾಸು, ಯುವಕರಲ್ಲಿ 21ನೇ ಶತಮಾನಕ್ಕೆ ಸರಿಯಾಗುವಂತಹ ಕೌಶಲ್ಯಗಳನ್ನು ವೃದ್ಧಿಸುವ ಮೂಲಕ ಮಾಡಲಾಗುತ್ತಿದೆ.
ನಗರದ ಮೂ ಲಸೌಕರ್ಯಗಳನ್ನು ಸಧೃಡಗೊಳಿಸುವ ಮೂಲಕ ನಗರ ವ್ಯವಸ್ಥೆಯನ್ನು ಸುಧಾರಿಸುವುದು ಜನಾಗ್ರಹ ಸಂಸ್ಥೆಯ ಆಶಯ.
Subscribe To Our Newsletter
Sign up for our newsletter to stay up to date with the latest in active citizenship and urban governance reforms in India’s cities and towns.